MORE on KANNADA

Online items for Kids 
due to School closing (Not all are in Kannada and not all are free)

ABC Mouse
Preschool Through 2nd Grade:
ABCmouse, Early Learning Academy: Please visit www.ABCmouse.com/redeem and redeem your access code.
Preschool through 6th Grade:
ReadingIQ: Please visit www.ReadingIQ.com/redeem and redeem your access code.
3rd Through 8th Grade
Adventure Academy: Please visit www.AdventureAcademy.com/redeem and redeem your access code.
Scholastic Learn at Home
Free resource that gives kids access to 20+ days of learning, challenges, books, articles and more – can be done solo or with siblings/family
Cincinnati Zoo
Daily facebook live zoo exhibits where zoologists teach kids about a new animal of the day (3 PM EST). You can submit questions in advance
Pete the Cat – Live Storytime with James Dean (author)
Streaming live via Instagram TV @ 12 pm EST
Lunch Doodles with Children’s Author Mo Willems
Weekdays at noon – kids learn to draw, doodle and more.
Oceans Initiative
Weekly “chat with a marine biologist” about marine life, conservation, animals and more via their facebook live page (11 am PST)
AMAR CHITRA KATHA - 61 books
Set of Amar Chitra Katha books for free to read.
Activities for Kids (Kindergarten to 8th)
Lot of in house activities for kids.
Watch Astronauts Reading Stories From Space
The concept was developed by Patricia Tribe, the former director of education at Space Center Houston, and Alvin Drew, the first NASA astronaut to read a story in space for the program, during the final mission of the space shuttle Discovery.The pair were looking to find a way to encourage reading among kids while also promoting STEM education, and landed on the idea of having on-duty ...

ಕನ್ನಡ ವ್ಯಾಕರಣ - Kannada Grammer

Learn Kannada Grammer
Click to download the file "Kannada Grammer"

ಕನ್ನಡ ಬಾಲ ಬೋಧೆ - Kannada Bala Bodhe

"Kannada Bala Bodhe" is a kannada book written by Mr. Vasudevaiah which helped kids learn kannada along with the basic kannada rhymes which we used to sing while we were kids and in school.
Click to download the file "Kannada Bala Bodhe"

ಹಾಡು - ಕನ್ನಡ ಅಕ್ಷರ ಮಾಲೆ
A song on Kannada Akshara maale


ಕೇಳಿರೊಂದು ಕಥೆಯ - Kelirondu Katheya

ಕೇಳಿರೊಂದು ಕಥೆಯ- Kelirondu Katheya

Kelirondu Katheya is the first and only digital program started towards teaching and preserving Kannada through engaging stories.


More than 70 stories with morals, positive message . Show us your support by sharing about Kelirondu Katheya with your kannada friends and families. 

Link to "Kelirondu Katheya" Podcast

ಕನ್ನಡದ ವಿಸ್ಮಯ ನೋಡಿ 

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ  ಹೇಗೆ ಬೇಕಾದರೂ ಓದಿ. 


1. ಪಕೋಡ ಬೇಕಾ,ಬೇಡ ಕೋಪ. 

2. ನಾಗಮಣಿ ಮಗನಾ 

3. ಮದ್ರಾಸಿನ ಸಿದ್ರಾಮ 

4. ರುಮಾಲು ಶಾಲು ಮಾರು 

5. ನೆಗಡಿ ಅಲ್ವಾ ಅಡಿಗನೆ 

6. ಗಯಾದ ವೇದ ಯಾಗ 

7. ದಿವಾಕರ ಮಾರಕವಾದಿ 

8. ಕುಬೇರ ಬಗ್ಗಿ ತಗ್ಗಿ ಬರಬೇಕು 

9. ತಿಮ್ಮ ಸದಾ ಸಮ್ಮತಿ 

10. ರೋಡಿನಲ್ಲೇ ನಡೀರೋ 

11. ಮನುಜನ ಹೀನ ಜನುಮ 

12. ಗೂಡಿನಾ ಬಾಳು ಬಾನಾಡಿಗೂ 

13. ಪಂಜರದ ಗಿಳಿಗಿದರ ಜಪಂ 

14.ವರದಪ್ಪ ಕೊಡು ಕೊಪ್ಪದ ರವ 

15. ಗಜಾನನನ ಜಾಗ 

16. ಕುಬೇರ ಸಿಹಿ ಸರಿ ಸಾಕು, ನಾನು ಸೀನಪ್ಪನ ಸೀನು ನಾಕು ಸಾರಿ ಸಹಿಸಿರಬೇಕು 

17.ತೋರಿಸೇ ಲತಾ ಪಾರಿಜಾತ, ಜಾರಿ ಪಾತಾಲ ಸೇರಿತೋ 

18. ಕೋಳೀಕೇ ರಂಗ,ನೀರು ನೀ ಗರಂ ಕೇಳಿಕೋ 

19.ವಸಿ ಸೋಡಿ ಕೊಡಿಸೋ ಸಿವ 

20. ನಗಾರಿ ಭೇರಿ ಗಾನ 

21.  ವಿಕಟಕವಿ


ನಮ್ಮ ಕನ್ನಡವೇ ವಿಸ್ಮಯ..


Wild Karnataka


ಆಸನ ಪ್ರಾಣಾಯಾಮ ಮುದ್ರಾ ಬಂಧ 
- ಸ್ವಾಮಿ ಸತ್ಯಾನಂದ ಸರಸ್ವತಿ

A step by step guide to Pranayama Mudra bandha. 
Click to download the file "Asana Pranayama Mudra Banda"

Map of Bengaluru

Click here to see the map of "Bengaluru"

Cure Yourself by Vaishali Parekh

A book on remedies for day to day small ailments. The book is having full particulars about disease, cause of disease, remedies from our kitchen.
Click here to download the book for "Cure Yourself"

ದೇವತಾ ಸ್ತೋತ್ರಗಳು

Click here to download the book "ದೇವತಾ ಸ್ತೋತ್ರಗಳು"

ಅನುಭವ ಪಾಕಶಾಸ್ತ್ರ

Click here to download the book "ಅನುಭವ ಪಾಕಶಾಸ್ತ್ರ"

ನಕ್ಕು ನಲಿಯುವ; a comedy cartoons to enjoy

Click here to download "ನಕ್ಕು ನಲಿಯುವ"

ಭಾರತದ ಚರಿತ್ರೆಯ ಕಿರು ಪರಿಚಯ

ಇಲ್ಲಿದೆ ನೋಡಿ ನಿಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗೆ ಪ್ರಪಂಚದ ಹಾಗು ಭಾರತದ ಚರಿತ್ರೆಯ ಕಿರು ಪರಿಚಯ.

ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
ಕ್ರಿ.ಪೂ.1000 ಕಬ್ಬಿಣದ ಬಳಕೆ.
ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
ಕ್ರಿ.ಶ.300-888 ಕಂಚಿಯ ಪಲ್ಲವರು.
ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
ಕ್ರಿ.ಶ.1290-1320 ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
ಕ್ರಿ.ಶ.1627-1680 ಶಿವಾಜಿಯ ಕಾಲ.
ಕ್ರಿ.ಶ.1757 ಪ್ಲಾಸಿ ಕದನ.
ಕ್ರಿ.ಶ.1764 ಬಕ್ಸಾರ ಕದನ.
ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
ಕ್ರಿ.ಶ.1824-ಕಿತ್ತೂರು ದಂಗೆ.
ಕ್ರಿ.ಶ‌.1837:ಅಮರ ಸುಳ್ಯ ದಂಗೆ;ಬ್ರಿಟಿಷ್ ತೆರಿಗೆ ಪದ್ದತಿ ಮತ್ತು ಹೇರಿಕೆಯ ವಿರುದ್ಧ.
ಕ್ರಿ.ಶ.1857 ಸಿಪಾಯಿ ದಂಗೆ.
ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.

🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.

ಪ್ರಮುಖ ಹುದ್ದೆಗಳ ಅವದಿ 
⚫ ರಾಷ್ಟ್ರಪತಿ=5ವರ್ಷ
⚫ ಉಪರಾಷ್ಟ್ರಪತಿ=5ವರ್ಷ
⚫ ರಾಜ್ಯ ಸಭಾ ಸದಸ್ಯ=6ವರ್ಷ
⚫ ಲೋಕ ಸಭಾ ಸದಸ್ಯ=5ವರ್ಷ
⚫ ರಾಜ್ಯಪಾಲರು= 5ವರ್ಷ
⚫ ವಿಧಾನ ಸಭಾ ಸದಸ್ಯ=5ವರ್ಷ
⚫ ವಿಧಾನ ಪರಿಷತ್ ಸದಸ್ಯ=6ವರ್ಷ

ಚುನಾವಣೆ ಸ್ಪರ್ಧಿಸುವ ವಯಸ್ಸು 
⚫ ರಾಷ್ಟ್ರಪತಿ=35ವರ್ಷ
⚫ ಉಪರಾಷ್ಟ್ರಪತಿ=35ವರ್ಷ
⚫ ರಾಜ್ಯ ಸಭಾ ಸದಸ್ಯ=30ವರ್ಷ
⚫ ಲೋಕ ಸಭಾ ಸದಸ್ಯ=25ವರ್ಷ
⚫ ರಾಜ್ಯಪಾಲರು= 35ವರ್ಷ
⚫ ವಿಧಾನ ಸಭಾ ಸದಸ್ಯ=25ವರ್ಷ
⚫ ವಿಧಾನ ಪರಿಷತ್ ಸದಸ್ಯ=30ವರ್ಷ
⚫ ಗ್ರಮ ಪಂಜಾಯತ್ ಸದಸ್ಯ=21ವರ್ಷ
⚫ ಮತದಾನ ವಯಸ್ಸು=18ವರ್ಷ

ಭಾರತದ ನೌಕಾಪಡೆ ಕಛೇರಿ
⚫ ಪಶ್ಚಿಮ ನೌಕಾಪಡೆ=ಮುಂಬಯಿ
⚫ ಪೂರ್ವ ನೌಕಾಪಡೆ=ವಿಶಾಖಪಟ್ಟಣಂ
⚫ ದಕ್ಷಿಣ ನೌಕಾಪಡೆ=ಕೊಚ್ಚಿ
⚫ ಆಗ್ನೇಯ ನೌಕಾಪಡೆ=ಅಂಡಮಾನ್ ನಿಕೋಬಾರ್

ಪ್ರಾಣಿಗಳ ಉಸಿರಾಟದ ಅಂಗಗಳು
⚫ಮೀನು=ಕಿವಿರು
⚫ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ
⚫ಸಸ್ತನಿ= ಶ್ವಾಸಕೋಶ
⚫ಎರೆಹುಳು ಜಿಗಣಿ= ಚರ್ಮ
⚫ಕೀಟಗಳು=ಟಕ್ರಯಾ(ಶ್ವಾಸನಾಳ)

ಪ್ರಪಂಚದ ಪ್ರಮುಖ ಸಸ್ಯವರ್ಗಗಳು
⚫ಅಮೆರಿಕಾ=ಪ್ರೈರಿ ಹುಲ್ಲುಗಾವಲು
⚫ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು
⚫ಆಫ್ರಿಕಾ=ಸವನ್ನಾ ಹುಲ್ಲುಗಾವಲು
⚫ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು
⚫ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು
⚫ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು
⚫ಯುರೋಪ್=ಸ್ಟೆಪಿಸ್ ಹುಲ್ಲುಗಾವಲು
⚫ಗಯಾನಾ=ಲಾನಸ್ ಹುಲ್ಲುಗಾವಲು
⚫ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು

ಕಣಿವೆ ಮಾರ್ಗ
⚫ಶಿವಮೊಗ್ಗದಿಂದ ಉಡುಪಿ=ಆಗುಂಬೆ ಘಾಟ
⚫ಚಿಕ್ಕಮಂಗಳೂರುದಿಂದ ಮಂಗಳೂರು=ಚಾರ್ಮಡಿ ಘಾಟ
⚫ಶಿರೂರುದಿಂದ ಬೈಂದೂರು=ಕೊಲ್ಲೂರು ಘಾಟ

ಭಾರತದ ನಗರಗಳು ಮತ್ತು ಅವುಗಳ ಅಡ್ಡ ಹೆಸರುಗಳು
1.ವಿಶಾಖಪಟ್ಟಣ -- ಭಾಗ್ಯನಗರ,(city of destiny)
2.ವಿಜಯವಾಡ -- ಗೆಲುವಿನ ಸ್ಥಾನ (place of victory)
3.ಗುಂಟುರು -- ಮೆಣಸಿನಕಾಯಿಗಳ ನಗರ, ಮಸಾಲೆ ನಗರ

ಉತ್ತರಪ್ರದೇಶ
1.ಆಗ್ರಾ -- ತಾಜನಗರಿ
2.ಕಾನ್ಪುರ -- ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3.ಲಕ್ನೋ -- ನವಾಬರ ನಗರ (city of nawab's)
4.ಪ್ರಯಾಗ -- ದೇವರ ಮನೆ
5.ವಾರಾಣಾಸಿ -- ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.

ಗುಜರಾತ
1. ಅಹಮದಾಬಾದ -- ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,
2.ಸೂರತ್ -- ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.

ಕರ್ನಾಟಕ
1.ಬೆಂಗಳೂರು -- ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2.ಕೂರ್ಗ್ಸ -- ಭಾರತದ ಸ್ಕಾಟ್ಲೆಂಡ್.
3.ಮೈಸೂರ -- ಸಾಂಸ್ಕ್ರತಿಕ ನಗರಿ.

ಓಡಿಸ್ಸಾ
1.ಭುವನೇಶ್ವರ -- ಭಾರತದ ದೇವಾಲಯ ನಗರ

ತಮಿಳುನಾಡು
1.ಕೊಯಮತ್ತೂರು -- ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ 

ಮಾಂಚೆಸ್ಟರ್
1.ಮಧುರೈ -- ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
2.ಸಲೇಂ -- ಮಾವಿನ ಹಣ್ಣಿನ ನಗರ.
3.ಚೆನ್ನೈ -- ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india

ಪಶ್ಚಿಮ ಬಂಗಾಳ
1.ಡಾರ್ಜಿಲಿಂಗ್ -- ಬೆಟ್ಟಗಳ ರಾಣಿ,
2.ದುರ್ಗಾಪೂರ -- ಭಾರತದ ರೋರ್
3.ಮಾಲ್ಡಾ -- ಮಾವಿನ ಹಣ್ಣಿನ ನಗರ.
4.ಕಲ್ಕತ್ತ -- ಅರಮನೆಗಳ ನಗರ.

ಜಾರ್ಖಂಡ್
1.ಧನಬಾದ್ -- ಭಾರತದ ಕಲ್ಲಿದ್ದಲು ರಾಜಧಾನಿ.
2.ಜಮಶೇಡಪುರ -- ಭಾರತದ ಸ್ಟೀಲ್ ನಗರ

ತೆಲಂಗಾಣ
1.ಹೈದ್ರಾಬಾದ್ -- ಮುತ್ತುಗಳ ನಗರ, ಹೈಟೆಕ್ ಸಿಟಿ.

ರಾಜಸ್ತಾನ
1.ಜೈಪುರ -- ಗುಲಾಬಿ ನಗರ, ಭಾರತದ ಪ್ಯಾರಿಸ್
2.ಜೈಸಲ್ಮೇರ್ -- ಭಾರತದ ಸ್ವರ್ಣ ನಗರ
3.ಉದಯಪುರ -- ಬಿಳಿನಗರ
4.ಜೋಧಪುರ -- ನೀಲಿನಗರ, ಸೂರ್ಯನಗರ.

ಜಮ್ಮು ಕಾಶ್ಮೀರ
1.ಕಾಶ್ಮೀರ -- ಭಾರತದ ಸ್ವಿಜರ್ಲೇಂಡ್
2.ಶ್ರೀನಗರ -- ಸರೋವರಗಳ ನಗರ

ಕೇರಳ
1.ಕೊಚ್ಚಿ -- ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು
2.ಕೊಲ್ಲಂ -- ಅರಬ್ಬೀ ಸಮುದ್ರದ ರಾಜ.

ಮಹಾರಾಷ್ಟ್ರ
1.ಕೊಲ್ಲಾಪುರ -- ಕುಸ್ತಿಪಟುಗಳ ನಗರ
2.ಮುಂಬೈ -- ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
3.ನಾಗ್ಪುರ್ -- ಕಿತ್ತಳೆ ನಗರ
4.ಪುಣೆ -- ದಕ್ಷಿಣದ ರಾಣಿ(deccan queen)
5.ನಾಸಿಕ್ -- ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.

ಉತ್ತರಖಂಡ
1.ಋಷಿಕೇಶ -- ಋಷಿಗಳ ನಗರ, ಯೋಗ ನಗರ.

ದೆಹಲಿ
1.ದೆಹಲಿ -- ಚಳುವಳಿಗಳ ನಗರ.

ಪಯಣ
1.ಪಟಿಯಾಲಾ -- royal city of india,
2.ಅಮೃತಸರ್ -- ಸ್ವರ್ಣಮಂದಿರದ ನಗರ.

ಹರಿಯಾಣ
1.ಪಾಣಿಪತ್ತ -- ನೇಕಾರರ ನಗರ, ಕೈಮಗ್ಗದ ನಗರ.


★★★ ಕರ್ನಾಟಕ ನಮ್ಮ ರಾಜ್ಯ★★★
1.ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
2.ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
3.ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
4.ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
5.ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
6.ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
7.ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
8.ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
9.1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
10.ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
11.ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
12.1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
13.ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

★★★ ಕರ್ನಾಟಕದ ಪ್ರಥಮಗಳು ★★★
1.ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
2.ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3.ಕನ್ನಡ ಭಾಷೆಯ ಮೊದಲ ಪದ : ಇಸಿಲ.
4.ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
5.ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6.ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7.ಕನ್ನಡದ ಮೊದಲ ವಂಶ : ಕದಂಬ
8.ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9.ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
10.ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ★★★
1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ.
6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750
10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400
11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★
1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4.ಜನಸಂಖ್ಯೆ – 61130704 (2011 ಜನಗಣತಿಯಂತೆ)
5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6.ಕಂದಾಯ ವಿಭಾಗಗಳು – 04
7.ಮಹಾನಗರಗಳು – 10
8.ಜಿಲ್ಲೆಗಳು – 30
9.ತಾಲ್ಲೂಕಗಳು – 177
10.ಹೋಬಳಿಗಳು – 347
11.ಮುನಸಿಪಲ್ ಕಾರ್ಪೋರೇಷನಗಳು – 219
12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★
1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ.
3.ರಾಜ್ಯ ವೃಕ್ಷ – ಶ್ರೀಗಂಧ.
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಹಾಸನದಲ್ಲಿ
24.ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.
ಅಂತೆಯೇ , 2017ರ ಗಣತಿಯ ಪ್ರಕಾರ ಭಾರತದ ಧರ್ಮಾಧಾರಿತ ಜನಸಂಖ್ಯೆ*

ಅಣೆಕಟ್ಟು- ಸ್ಥಳ- ನದಿ- ಜಲಾಶಯ
ಭಾಕ್ರನOಗಲ್ ಅಣೆಕಟ್ಟು
ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
ನದಿ -ಸಟ್ಲೇಜ
ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ.

ಹಿರಾಕುಡ್ ಅಣೆಕಟ್ಟು
ಸ್ತಳ -ಸಂಬಲಪುರ (ಒಡಿಶಾ)
ನದಿ -ಮಹಾನದಿ.

ಮೇಟ್ಟುರು ಅಣೆಕಟ್ಟು
ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು
ನದಿ -ಕಾವೇರಿ
ಜಲಶಯದ ಹೆಸರು -ಸ್ಟೇನ್ಲಿ ಜಲಶಯ.

ನಾಗಾರ್ಜುನ ಅಣೆಕಟ್ಟು
ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
ನದಿ -ಕೃಷ್ಣ.

ಇಡುಕ್ಕಿ ಆಣೇಕಟ್ಟು
ಸ್ತಳ -ಇಡುಕ್ಕಿ (ಕೇರಳ )
ನದಿ -ಪೆರಿಯಾರ್.

ರಾಮ ಗಂಗಾ ಅಣೆಕಟ್ಟು
ಸ್ತಳ -ಕಲಾಗಡ (ಉತ್ತರಾಖಂಡ )
ನದಿ -ರಾಮಗOಗಾ.

ಪೋಡOಪಾಡು ಅಣೆಕಟ್ಟು
ಸ್ತಳ -ನೀಜಮಾಬಾದ (ತೆಲಂಗಾಣ )
ನದಿ -ಗೋದಾವರಿ.

ಊಕ್ಕೈ ಅಣೆಕಟ್ಟು
ಸ್ತಳ -ಊಕ್ಕೈ (ಗುಜರಾತ್ )
ಜಲಶಯದ ಹೆಸರು -ವಲ್ಲಭ ಸಾಗರ್
ನದಿ -ತಪತಿ.

ಪೋಂಗ ಅಣೆಕಟ್ಟು
ಸ್ತಳ -ತಲವಾರ ( ಹಿಮಾಚಲ ಪ್ರದೇಶ )
ನದಿ -ಬಿಯಾಸ್.

ಗಾಂಧಿ ಸಾಗರ್ ಅಣೆಕಟ್ಟು
ಸ್ತಳ -ಮ್ಯಂಡ್ ಸಾರ್
ನದಿ - ಚೇಂಬಲ ಯಮೂನ ನದಿ.

ಕೋಯನ್ನ ಅಣೆಕಟ್ಟು
ಸ್ತಳ -ಕೊಯ್ನ (ಮಹರಾಷ್ಟ)
ನದಿ -ಕೋಯನ್
ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ

ಅಲಮಟ್ಟಿ ಅಣೆಕಟ್ಟು
ಸ್ತಳ -ಅಲಮಟ್ಟಿ ( ಕರ್ನಾಟಕ )
ನದಿ -ಕೃಷ್ಣ
ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ.

ತವಾ ಅಣೆಕಟ್ಟು
ಸ್ತಳ -ಹೊಸಂಗಾಬಾದ (ಮಧ್ಯ ಪ್ರದೇಶ)
ನದಿ -ತವಾ

ಜಯಕವಡಿ ಅಣೆಕಟ್ಟು
ಸ್ತಳ -ಜಯಕವಡಿ (ಮಹರಸ್ಟ್ರ)
ನದಿ -ಗೋದವರೀ
ಜಲಶಯದ ಹೆಸರು -ನಾಥಸಾಗರ್ ಜಲಶಯ

ರಿಹಂದ ಅಣೆಕಟ್ಟು
ಸ್ತಳ -ಸೂನಭದ್ರ (ಉತ್ತರ ಪ್ರದೇಶ)
ನದಿ -ರಿಹಂದ

ಸರ್ದರ ಸರೋವರ ಅಣೆಕಟ್ಟು
ಸ್ತಳ -ನವಗO (ಗುಜರಾತ್)
ನದಿ - ನರ್ಮದಾ

ರಣ ಪ್ರತಾಪ್ ಸಾಗರ್ ಅಣೆಕಟ್ಟು
ಸ್ತಳ -ರವಬತ (ರಾಜಸ್ತಾನ್)

ಉತ್ತರ ಭಾರತದ ನದಿಗಳು:
1.ನದಿ :— ಸಿಂಧೂ (ಇಂಡಸ್ ನದಿ)
●ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್
●ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ
●ವ್ಯಾಪ್ತಿ ರಾಜ್ಯಗಳು :— (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
●ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ
●ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
●ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
●ವಿಶೇಷತೆಗಳು :—
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.

2.ನದಿ :— ಗಂಗಾ
●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್
●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್
●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,
●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)
●.ವಿಶೇಷತೆಗಳು :—
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.

3.ನದಿ :— ಬ್ರಹ್ಮಪುತ್ರ
●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್
●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)
●.ವಿಶೇಷತೆಗಳು :—
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.

4..ನದಿ :— ಯಮುನಾ
●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,
●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.
●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)
●.ವಿಶೇಷತೆಗಳು :—
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)

5..ನದಿ :— ಸಬರಮತಿ
●.ನದಿಯ ಉಗಮ ಸ್ಥಾನ :— ಉದಯಪುರ್, ರಾಜಸ್ಥಾನ .
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.
●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ
●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ
●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು

★ ದಕ್ಷಿಣ ಭಾರತದ ನದಿಗಳು :
1.ನದಿ :— ಕೃಷ್ಣಾ (ದ.ಭಾರತದ ಪೂರ್ವಕ್ಕೆ ಹರಿಯುವ ನದಿ)
●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.
●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.
●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು
●.ವಿಶೇಷತೆಗಳು :—
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.

2..ನದಿ :— ನರ್ಮದಾ (ರೇವಾ) (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ)
●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರ
ದೇಶ

ಪ್ರಪಂಚದ ಪ್ರಮುಖ ಮರುಭೂಮಿಗಳು :-
(Great Deserts of the World)
ಭೂಮಿಯ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು # ಮರುಭೂಮಿ ಎಂದು ಕರೆಯುತ್ತಾರೆ.

1. ಅಂಟಾರ್ಟಿಕ ಮರುಭೂಮಿ
 ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ.

2. ಸಹಾರ ಮರುಭೂಮಿ
ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು, ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ. ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರುಭೂಮಿ" ಆಗಿದೆ. ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಒಂಟೆ, ಚಿರತೆ, ನರಿ, ಹಲ್ಲಿ, ಆಫ್ರಿಕನ್ ಕಾಡು ನಾಯಿ, ಉಷ್ಟ್ರಪಕ್ಷಿ, ಮರುಭೂಮಿ ಮೊಸಳೆ.

3. ಆರ್ಟಿಕ್ ಮರುಭೂಮಿ
ಆರ್ಟಿಕ್ ಮರುಭೂಮಿ ಭೂಮಿಯ ಉತ್ತರ ದ್ರುವದಲ್ಲಿ ಕಂಡು ಬರುತ್ತದೆ. ಈ ಮರುಭೂಮಿ ಜಗತ್ತಿನ 3ನೇ ದೊಡ್ಡ ಮರುಭೂಮಿಯಾಗಿದ್ದು ಹಾಗೂ 2ನೇ ಅತಿ ದೊಡ್ಡ ಶೀತ ಮರುಭೂಮಿಯಾಗಿದೆ.ಇದರ ವಿಸ್ತೀರ್ಣವು 2,600,000 ಚ.ಕಿ.ಮೀಗಳಾಗಿವೆ. ಈ ಮರುಭೂಮಿ ಹಿಮದಿಂದ ಕೂಡಿದೆ. ಈ ಮರುಭೂಮಿಯು ಅರ್ಟಿಕ್ ಸಾಗರ, ಕೆನಡಾ, ರಷ್ಯಾ, ಗ್ರೀನಲ್ಯಾಂಡ್, ಯುನೈಟೆಡ್ ಸ್ಪೇಟ್ಸ್, ನಾರ್ವೆ, ಸ್ಪೀಡನ್, ಪಿನಲ್ಯಾಂಡನ್ ಸ್ಪಲ್ಪ ಭಾಗವನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಪ್ರಾಣಿಗಳೆಂದರೆ ಆರ್ಟಿಕ್ ಮೊಲಸಾರಂಗ, ಅರ್ಟಿಕ್ ನರಿ ಮತ್ತು ತೋಳ, ಧ್ರುವ ಕರಡಿ, ಸೀಲ್, ಮುಂತಾದವುಗಳು. ಈ ಮರುಭೂಮಿಯು ಇತ್ತೀಚಿಗೆ ಜಾಗತಿಕ ತಾಪಮಾನ ಫಲವಾಗಿ ಇಲ್ಲಿನ ನೀರ್ಲಗಲ್ಲುಗಳು ಕರಗುತ್ತಿದೆ.

4. ಅರೇಬಿಯನ್ ಮರುಭೂಮಿ
ಈ ಮರುಭೂಮಿಯು ಮಧ್ಯ ಪೂರ್ವ ಪ್ರಾಂತ್ಯದಲ್ಲಿದ್ದು, ಇದು ಯಮನ್ ದೇಶದಿಂದ ಪರ್ಷಿಯನ್ ಗಲ್ಪ್ ವರೆಗೂ ಮತ್ತು ಒಮಾನ್ ನಿಂದ ಜೋರ್ಡಾನ ಮತ್ತು ಇರಾಕ್ ವರೆಗೂ ವಿಸ್ತರಿಸಿದೆ. ಇದು ಅರೆಬಿಯನ್ ಉಪಖಂಡದಲ್ಲಿ ವ್ಯಾಪಿಸಿದೆ. ಇದು ಜೋರ್ಡಾನ್, ಕುವೈತ್, ಇರಾಕ್, ಕತಾರ್, ಉಮ್ಮಾನ್, ಸೌದಿ ಅರೇಬಿಯಾ, ಯುನೈಟೆಡ್ ಎಮರೈಟಿಸ್, ಎಮನ್ ದೇಶದಲ್ಲಿ ವ್ಯಾಪಿಸಿದೆ. ಇದರ ವಿಸ್ತೀರ್ಣವು 2,330,000 ಚ.ಕಿ.ಮೀ, ಇಲ್ಲಿ ತೈಲ ಸ್ವಾಭಾವಿಕ ಅನಿಲ, ಪಾಸ್ಪೇಟ್, ಮತ್ತು ಗಂಧಕದ ಸಂಪನ್ಮೂಲವಿದೆ. ಈ ಮರುಭೂಮಿ ಬಹುತೇಕ ಸೌದಿ ಅರೇಬಿಯಾದಲ್ಲಿ ವಿಸ್ತರಿಸಿಕೊಂಡಿದೆ. 

5. ಕಲಹರಿ ಮರುಭೂಮಿ
ಈ ಮರುಭೂಮಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದೆ. ಈ ಮರುಭೂಮಿಯಲ್ಲಿ ಬಾಡ್ಸಾನಾ, ನಮೀಬಿಯಾ, ದಕ್ಷಿಣ ಆಪ್ರ್ಹಿಕಾ ದೇಶಗಳಲ್ಲಿ ವ್ಯಾಪಿಸಿದೆ. ಈ ಮರುಭೂಮಿಯಲ್ಲಿ ಚೋಬೆ ನ್ಯಾಷನಲ್ ಪಾರ್ಕ, ಸೆಂಟ್ರಲ್ ಕಲಹರಿ ಗೇಮ್ ರಿಸರ್ವ, ಕಲಹರಿ ಬೇಸಿನ್ಸ್, ಕಲಹರಿ ಜೇಮ್ಸ್ ಬಾಕ್ ನ್ಯಾಷನಲ್ ಪಾರ್ಕ, ಮಾಕಗಾಡಿ ಪಾನ್ಸ್ ಸ್ಥಳಗಳು ಕಂಡು ಬರುತ್ತವೆ. ಕಲಹರಿ ಮರುಭೂಮಿಯ ವಿಸ್ತೀರ್ಣ 900,000 ಚ.ಕಿ.ಮೀ ಈ ಮರುಭೂಮಿ ಪಕ್ಕದಲ್ಲಿ ಅರೆಂಜ್ ನದಿಯು ಹರಿಯುತ್ತದೆ. ಬ್ರಾಂಡ್ ಬರ್ಗ ಪರ್ವತವು ಅತಿ ದೊಡ್ಡ ಪರ್ವತವಾಗಿದೆ 8560 ಅಡಿ.

6. ಪೆಟಗೋನಿಯನ್ ಮರುಭೂಮಿ
ಈ ಮರುಭೂಮಿಯು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ಮರುಭೂಮಿ. ಈ ಮರುಭೂಮಿಯ ವಿಸ್ತೀರ್ಣ 670,000 ಚ.ಕಿ.ಮೀಗಳು. ಈ ಮರುಭೂಮಿಯು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದ್ದು, ಪ್ರಮುಖವಾಗಿ ಅರ್ಜೆಂಟೈನಾ ಮತ್ತು ಚಿಲಿ ದೇಶಗಳಲ್ಲಿ ವ್ಯಾಪಿಸಿದೆ. ಇಲ್ಲಿ ಹುಲ್ಲುಗಳಿಗೆ ಬದಲಾಗಿ ಪೊದೆಗಳು ಕಂಡು ಬರುತ್ತದೆ. ಈ ಮರುಭೂಮಿಯಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಗೂಬೆ, ಮರುಭೂಮಿ ಹಲ್ಲಿ, ಪಿಗ್ಮಿ ಆರಿಡಿಲೋ ಮುಂತಾದಗಳು.

7. ಗ್ರೇಟ್ ವಿಕ್ಟೋರಿಯಾ ಮರುಭೂಮಿ
ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಮರುಭೂಮಿಯಾಗಿದೆ, ಇದು ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ ಸಣ್ಣ ಸಣ್ಣ ಮರಳಿನ ಬೆಟ್ಟೆಗಳು ಕಂಡು ಬರುತ್ತದೆ. 1875ರಲ್ಲಿ ಬ್ರಿಟಿಷ್ ನಾವಿಕ ಎರನೆಸ್ಟ್ ಗೆಲಿಸ್ ಮೊಟ್ಟ ಮೊದಲ ಬಾರಿಗೆ ಈ ಮರುಭೂಮಿಯಲ್ಲಿ ಹಾದು ಹೋದ ಯುರೋಪಿಯೆನ್ ಆಗಿದ್ದಾರೆ. ಈ ಮರುಭೂಮಿಯಲ್ಲಿ ವರ್ಲ್ಡ ವೈಡ್ ಲೈಫ್ ಫಂಡ್ ನ ಎಕೋ ರಿಜನ್ ಆಗಿದೆ. ಈ ಮರುಭೂಮಿಯಲ್ಲಿ ಗ್ರೇಟ್ ಡೆಸರ್ಟ ಸ್ಕಿಂಕ್ ಮತ್ತು ಸ್ಯಾಂಡಿ ಹಿಲ್ ಡುನಾಲ್ಡ್ ಎಂಬ ಪ್ರಾಣಿ ಕಂಡು ಬರುತ್ತದೆ.

8. ಗ್ರೇಟ್ ಬಸಿನ್ ಮರುಭೂಮಿ
ಈ ಮರುಭೂಮಿಯು ಉತ್ತರ ಅಮೇರಿಕಾದಲ್ಲಿ ವ್ಯಾಪಿಸಿದೆ. ಈ ಮರುಭೂಮಿಯು 492,000 ಕಿ.ಮೀ ವಿಸ್ತೀರ್ಣ ಹೊಂದಿದೆ. ಈ ಮರುಭೂಮಿಯು ನವೆಡಾ, ಕ್ಯಾಲಿಪೋರ್ನಿಯಾ, ಉತ್ತಾ ದೇಶಗಳಿಂದ ಕೊಲೊಡೊ ನದಿಯವರೆಗೆ ವ್ಯಾಪಿಸಿದೆ. ಇದು ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಆಲ್ಟ್ರಿಪ್ಲೆಕ್ಸ್ ಎಂಬ ವಿಶೇಷ ಜಾತಿಯ ಸಸ್ಯವು ಕಂಡು ಬರುತ್ತದೆ. ಸೆಜೆ ಬ್ರಷ್ ಎಂಬುದು ಈ ಮರುಭೂಮಿಯಲ್ಲಿ ಕಂಡುಬರುವ ಪ್ರಮುಖವಾದಂತಹ ಸಸ್ಯವಾಗಿದೆ.

9. ಸೈರಿಯನ್ ಮರುಭೂಮಿ
ಈ ಮರುಭೂಮಿಯು ಮಧ್ಯಪೂರ್ವ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಈ ಮರುಭೂಮಿಯು ಜಗತ್ತಿನ ಅತಿ ದೊಡ್ಡ ಮರುಭೂಮಿಯಾಗಿದೆ. ಇದರ ವಿಸ್ತೀರ್ಣ 520,000 ಆಗಿದೆ. ಈ ಮರುಭೂಮಿಯು ಸೈರಿಯಾ, ಇರಾಕ್, ಜೋಡಾರ್ನ, ಸೌದಿ ಅರೇಬಿಯಾಗಳಲ್ಲಿ ಕಂಡು ಬರುತ್ತದೆ.


ಪ್ರಪಂಚದ ಸರೋವರಗಳು ಮತ್ತು ದೇಶಗಳು
*.ಕ್ಯಾಸ್ಪೀಯನ ಸರೋವರ- ಇರಾನ್
*.ಸುಪೇರೀಯರ ಸರೋವರ- ಅಮೆರಿಕ
*.ವಿಕ್ಟೋರಿಯಾ ಸರೋವರ- ತಂಜೇನಿಯ
*.ಯೂರಲ್ ಸರೋವರ- ರಷ್ಯ
*.ಮಿಚಿಗನ್ ಸರೋವರ- ಅಮೆರಿಕ
*.ಬೈಕಲ್ ಸರೋವರ- ರಷ್ಯ
*.ಗ್ರೇಟಬೀಯರ ಸರೋವರ- ಕೆನಡಾ
*.ಲದೂಗ ಸರೋವರ- ರಷ್ಯ
*.ಮಾನಸ ಸರೋವರ- ಟಿಬೆಟ್
*.ಸೋಸೇಕುರ ಸರೋವರ- ಟಿಬೆಟ್
*.ಟಿಟಿಕಾಕ ಸರೋವರ- ಪೆರು
*.ರುಡಾಲ್ಫ್ ಸರೋವರ- ಕೀನ್ಯಾ
*.ನ್ಯಾಸ ಸರೋವರ- ತಾಂಜೇನಿಯ
*.ವಾನೇರ್ಸ ಸರೋವರ- ಸ್ವಿಡನ


ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು
೧) ಫುಡ್ ಪಾರ್ಕ್- ತುಮಕೂರು
೨) ರೈಸ್‌ ಪಾರ್ಕ್- ಕಾರಟಗಿ
೩) ಅಕ್ಷಯ ಆಹಾರ ಪಾರ್ಕ್- ಹಿರಿಯೂರು
೪) ಸ್ಪೈಸ್ ಪಾರ್ಕ್- ಬ್ಯಾಡಗಿ
೫) ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ
೬) ಸಾಗರೊತ್ಪನ್ನ ಪಾರ್ಕ್-ಮಂಗಳೂರ
೭) ಇನ್ನೊವ ಅಗ್ರಿ ಬಯೊಪಾರ್ಕ- ಮಾಲೂರು
೮) ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ
೯) ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು
೧೦) ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ ಕೊನೇಹಳ್ಳಿ


Share by: